ಅಭಿಪ್ರಾಯ / ಸಲಹೆಗಳು

ದಾಮು ಬಗ್ಗೆ(DAMU)

ಜಿಲ್ಲಾ ಕೃಷಿ ಹವಾಮಾನ ಘಟಕ.....

     ನೂರಾರು ವರ್ಷಗಳಿಂದ ಭಾರತದ ಕೃಷಿಯು ಹವಾಮಾನವನ್ನು ಅದರಲ್ಲೂ ಮಳೆಯ ಮಾರುತಗಳನ್ನು ಅವಲಂಬಿಸಿದೆ. ವಾಯುಗುಣ ಮತ್ತು ಹವಾಮಾನ ವೈಪರೀತ್ಯತೆಯು ದೇಶದ ಆಹಾರದ ಬೆಳೆವಣಿಗೆಯಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿ ವರ್ಷ ಹವಾಮಾನದ ಸಂಗತಿಗಳಾದ ಅತಿವೃಷ್ಠಿ, ಚಂಡಮಾರುತ, ಆಲಿಕಲ್ಲು ಮಳೆ, ಒಣ ಪರಿಸ್ಥಿತಿ ಮುಂದುವರಿಕೆ, ಅನಾವೃಷ್ಠಿ, ಬಿಸಿ ಗಾಳಿ ಮತ್ತು ಚಳಿ ಗಾಳಿಯಿಂದ ಬೆಳೆ ಇಳುವರಿಯು ಕುಂಟಿತವಾಗುತ್ತಿದೆ.

     ಒಂದು ಭಾಗದಲ್ಲಿ ಹೆಚ್ಚು ಮಳೆಯಾದರೆ ಇನ್ನೊಂದು ಭಾಗದಲ್ಲಿ ಕಡಿಮೆ ಮಳೆಯಾಗುತ್ತದೆ. ಒಂದು ತಾಲ್ಲೂಕಿನಲ್ಲಿ ಆಲೂಗಡ್ಡೆ ಪ್ರಧಾನವಾಗಿದ್ದರೆ ಮತ್ತೊಂದು ತಾಲ್ಲೂಕಿನಲ್ಲಿ ಮಾವು ಪ್ರಧಾನವಾಗಿರುತ್ತದೆ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಮಳೆ ಬೆಳೆ ವಿಭಿನ್ನವಾಗಿರುವುದನ್ನು ಮನಗಂಡ ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ೧೨ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯಾ ಭಾಗಕ್ಕೆ ಅನುಸಾರವಾಗಿ ಕೇಂದ್ರೀಕೃತ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲಾಮಟ್ಟದ ಕೃಷಿ ಹವಾಮಾನ ಘಟಕ (DAMU) ಸ್ಥಾಪಿಸಿದೆ. ಈ ಘಟಕಗಳು ಆಯಾ ತಾಲ್ಲೂಕಿನ ಕೃಷಿಗೆ ಸಂಬAಧಿಸಿದ ಹವಾಮಾನ ಆಧಾರಿತ ಕೃಷಿ ಸಲಹೆಯ ಮಾಹಿತಿಯನ್ನು ನೀಡಲಿದೆ.

     ರೈತರಿಗೆ ಸ್ಥಳೀಯ ಭಾಷೆಯಲ್ಲಿ ಹವಾಮಾನ ಆಧಾರಿತ ಕೃಷಿ ಸಲಹೆಯನ್ನು ನೀಡುವ ಸಲುವಾಗಿ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕವನ್ನು ಕೃಷಿ ವಿಜ್ಞಾನ ಕೇಂದ್ರ ಟಮಕ ಕೋಲಾರದಲ್ಲಿ 2019 ರಲ್ಲಿ ಪ್ರಾರಂಭಿಸಿದ್ದು, ಈ ವ್ಯಾಪ್ತಿಯಲ್ಲಿ ಬರುವ ಎಲ್ಲಾ ೬ ತಾಲ್ಲೂಕುಗಳ ರೈತರು ಮಾಹಿತಿ ಪಡೆಯಬಹುದಾಗಿದೆ.

     ಹವಾಮಾನ ಆಧಾರಿತ ಕೃಷಿ ಸಲಹೆಗಳು ರೈತರಿಗೆ ಸಮಗ್ರ ಮಾರ್ಗದರ್ಶಿಯಾಗಿದ್ದು, ಇದು ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ, ನಾಟಿ, ಬಿತ್ತನೆ, ಹಂತವಾರು ಕೀಟ ಹಾಗೂ ರೋಗಗಳ ಮಾಹಿತಿ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ವಾರದಲ್ಲಿ ೨ ಬಾರಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಾಲ್ಲೂಕುವಾರು ಪ್ರತ್ಯೇಕ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ತಯಾರಿಸಲಾಗುವುದು.

ಹವಾಮಾನ ಆಧಾರಿತ ಕೃಷಿ ಸಲಹೆ ಅಥವಾ ಅಗ್ರೋಮೆಟ್ ಅಡ್ವೆöÊಸರೀ ಬುಲೆಟಿನ್ ತಯಾರಿಸುವ    ವಿಧಾನ:

 • ಬೆಳೆಯ ಮಾಹಿತಿ: ಬೆಳೆಗಳ ಸ್ಥಿತಿ, ಬೆಳೆಯ ಹಂತ, ಮಣ್ಣಿನ ತೇವಾಂಶದ ಪ್ರಮಾಣ (ಕಡಿಮೆ/ಹೆಚ್ಚು), ಕೀಟ/ರೋಗಗಳ ಹಾವಳಿ ಹಾಗೂ ಬೆಳೆಗಳಿಗೆ ಕಾಡುವ ಸಮಸ್ಯೆಗಳನ್ನು ಕೃಷಿ ವಿಜ್ಞಾನ ಕೇಂದ್ರದ ವಿವಿಧ ವಿಷಯ ತಜ್ಞರ ಮೂಲಕ ಹಾಗೂ ಕೃಷಿ ಇಲಾಖೆಯಿಂದ ಮಿಂಚAಚೆ / ದೂರವಾಣಿಯ ಮೂಲಕ ಪಡೆಯಲಾಗುವುದು.
 • ಜಾನುವಾರುಗಳ ಬಗ್ಗೆ ಮಾಹಿತಿ: ಆಯಾ ಪ್ರದೇಶಕ್ಕೆ ಅನುಗುಣವಾಗಿ  ಜಾನುವಾರು, ಕೋಳಿ, ಕುರಿ ಸಾಕಾಣೆ ಮತ್ತು ಮೀನುಗಾರಿಕೆ ಬಗ್ಗೆ, ಜೊತೆಗೆ ಋತುವಿಗೆ ಅನುಗುಣವಾಗಿ ಜಾನುವಾರುಗಳಿಗೆ ಬರಬಹುದಾದ ರೋಗಗಳು, ಅದಕ್ಕೆ ನೀಡಬಹುದಾದ ಲಸಿಕೆ, ಔಷಧಗಳ ಬಗ್ಗೆ ಆಯಾಭಾಗದ ಪಶು ವೈದ್ಯಾಧಿಕಾರಿಗಳಿಂದ ಮಿಂಚAಚೆ/ದೂರವಾಣಿ ಮೂಲಕ ಮಾಹಿತಿ ಪಡೆಯಲಾಗುವುದು.
 • ಹವಾಮಾನ ಮುನ್ಸೂಚನಾ ವರದಿ: ಭಾರತೀಯ ಹವಾಮಾನ ಇಲಾಖೆಯು ಮುಂದಿನ ೫ ದಿನಗಳವರೆಗಿನ ಹವಾಮಾನ ಅಂಶಗಳಾದ ಮಳೆ ಮತ್ತು ಮೋಡದ ಪ್ರಮಾಣ, ಗರಿಷ್ಠ ಮತ್ತು ಕನಿಷ್ಠ ತಾಪಮಾನ, ಬೆಳಗಿನ ಹಾಗೂ ಮದ್ಯಾಹ್ನದ ಆರ್ದ್ರತೆಯ ಪ್ರಮಾಣ, ಗಾಳಿಯ ದಿಕ್ಕು ಹಾಗೂ ವೇಗದ ಕುರಿತು ಮಾಹಿತಿ ನೀಡಲಾಗುತ್ತದೆ.
 • ಈ ಮೇಲ್ಕಂಡ ಎಲ್ಲಾ ಮಾಹಿತಿಯನ್ನು ಆಧರಿಸಿ ಕೃಷಿ ಹವಾಮಾನ ಶಾಸ್ತç ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಪರಸ್ಪರ ಚರ್ಚಿಸಿ, ಹವಾಮಾನ ಮುನ್ಸೂಚನೆ ಅನುಸಾರವಾಗಿ ಸೂಕ್ತ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ತಯಾರಿಸಲಾಗುವುದು.

ಇದರಿಂದ ರೈತರಿಗೆ ಬಿತ್ತನೆ ಕಾರ್ಯ ಹಾಗೂ ಅಂತರ ಬೇಸಾಯ ಮಾಡಲು ಸಮಯಕ್ಕನುಗುಣವಾಗಿ ಸಿಂಪರಣೆ ಮಾಡಲು, ಅನಗತ್ಯ ಕೀಟ/ರೋಗ ನಿರೋಧಕ ಸಿಂಪರಣೆಗಳನ್ನು ಕಡಿಮೆ ಮಾಡಲು, ಬೆಳೆಗಳಿಗೆ ನೀರು ಹಾಯಿಸುವುದನ್ನು ನಿರ್ಧರಿಸಲು, ಮುನ್ಸೂಚನೆಗೆ ಅನುಗುಣವಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಕಟಾವು ಮಾಡಿ ರಾಶಿ ಮಾಡಲು ಮತ್ತು ಕಟಾವಿನ ನಂತರದ ಕೆಲಸಗಳು, ಜೊತೆಗೆ ಋತುವಿಗೆ ಅನುಗುಣವಾಗಿ ಪಶು ಸಂಗೋಪನೆ, ಕುರಿ ಹಾಗೂ ಕೋಳಿ ಸಾಕಾಣಿಕೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ.

ಪ್ರಸಾರ: ಈ ಕೃಷಿ ಹವಾಮಾನ ಲಘು ಪ್ರಕಟಣೆಯನ್ನು ಭಾರತೀಯ ಹವಾಮಾನ ಇಲಾಖೆಯ ಜಾಲತಾಣದಲ್ಲಿ, m-kissan portal,, ಕೃಷಿ ಇಲಾಖೆಯ ಅಧಿಕಾರಿಗಳಿಗೆ, ಕ್ಷೇತ್ರ ಮಾಹಿತಿ ಅನುವುಗಾರರಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಹಾಗೂ ವಾಟ್ಸಾಪ್ ಮತ್ತು ಫೇಸ್ಬುಕ್ ಮೂಲಕ ನೀಡಲಾಗುವುದು.

ಗ್ರಾಮಾಂತರ ಮಟ್ಟದಲ್ಲಿ ರೈತರಿಗೆ ಹಾಗೂ ವಿಸ್ತರಣಾ ಅಧಿಕಾರಿಗಳಿಗೆ ಹವಾಮಾನ ಮುನ್ಸೂಚನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಲ್ಲಿ ಹವಾಮಾನ ಆಧಾರಿತ ಕೃಷಿ-ಸಲಹೆ ಮೂಲಕ ಕೃಷಿ ನಷ್ಟ ಕಡಿಮೆ ಮಾಡುವ ಕುರಿತು ಜಾಗೃತಿ ಮೂಡಿಸಲಾಗುವುದು

ಇತ್ತೀಚಿನ ನವೀಕರಣ​ : 25-07-2023 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕೋಲಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080